ಅಪಾಯ ಎಲ್ಲಿ ಹುಟ್ಟಿಕೊಳ್ಳುತ್ತದೋ ಅಲ್ಲೇ ಭಾರತ ಹೋರಾಡಿ ಅದನ್ನು ನಾಶ ಮಾಡುತ್ತದೆ- ಚೀನಾಗೆ ವಾರ್ನಿಂಗ್ ಕೊಟ್ಟ ದೋವಲ್…

ಭಾರತದ ವಿರುದ್ಧ ಸಮರಕ್ಕೆ ನಿಂತರೆ‌ ಯಾರ ಸೋಲಾಗುವುದು ಎಂದು ಇಡೀ ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಅದನ್ನು ಮೀರಿಯೂ ಚೀನಾ ಪದೇ ಪದೇ ಭಾರತವನ್ನು ಕೆಣಕುತ್ತಿದೆ. ಯಾರ ತಂಟೆಗೂ ಹೋಗದ ಭಾರತವನ್ನೇನಾದರೂ ಕೆಣಕಿದರೆ ಪರಿಣಾಮ ಬಹಳ ಭೀಕರವಾಗಿರುತ್ತದೆ ಎಂಬ ವಿಚಾರ ತಿಳಿದೂ ತಿಳಿದೂ ಚೀನಾ ಪದೇ ಪದೇ ಭಾರತವನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ತನ್ನ ದೇಶದಲ್ಲೇ‌ ಭೀಕರವಾದ ವೈರಸ್ ನ್ನು ಸೃಷ್ಟಿ ಮಾಡಿ ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿ ಚೀನಾ ತಾನೂ ಹಾಯಾಗಿ ಇರಬಹುದು. ಅಲ್ಲದೇ ಇಡೀ ವಿಶ್ವದಲ್ಲೇ ತಾನೇ ರಾಜನಂತಿರಬಹುದು ಎಂಬ ಹಗಲುಗನಸನ್ನು ಕಾಣುತ್ತಿತ್ತು. ಚೀನಾ ಸೃಷ್ಟಿಸಿರುವ ಕಾಣದ ದೈತ್ಯ ವೈರಸ್ ಗೆ ವಿಶ್ವ ತತ್ತರಿಸಿದ್ದು ಎಷ್ಟು ಸತ್ಯವೋ ಅಷ್ಟೇ ವೇಗವಾಗಿ ಆ ಕಾಣದ ವೈರಸ್ನ್ನು ಸೋಲಿಸಿ ಹೊರಬರುವುದು ಅಷ್ಟೇ ಸತ್ಯ. ಈಗಾಗಲೇ ಭಾರತ ಇಡೀ ವಿಶ್ವದಲ್ಲೇ ವೇಗವಾಗಿ ಕೊರೊನಾ ಸೋಂಕಿತರು ಗುಣಮುಖರಾಗಿರುವುದಲ್ಲದೆ ಅದಕ್ಕೆ ಬೇಕಾದ ವ್ಯಾಕ್ಸಿನ್ ನ್ನು ಕೂಡಾ ಕಂಡುಹಿಡಿಯುತ್ತಿದ್ದರೆ ಇತ್ತ ಗಡಿಯಲ್ಲಿ ಚೀನಾದ ಕ್ಯಾತೆಗೆ ತಕ್ಕ ಶಾಸ್ತಿ ಮಾಡಲು ಎಲ್ಲಾ ರೀತಿಯಲ್ಲೂ ತಯಾರಾಗಿ ನಿಂತಿದೆ ಭಾರತ. ಪದೇ ಪದೇ ತಂಟೆಗೆ ಬರುತ್ತಿರುವ ಚೀನಾಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೊಟ್ಟ ಎಚ್ಚರಿಕೆಯ ಬೆನ್ನಲ್ಲೇ ಇದೀ ಅಜಿತ್ ದೋವಲ್ ಅವರೂ ಚೀನಾಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಚೀನಾಗೆ ಖಡಕ್ ವಾರ್ನಿಂಗ್ ಕೊಟ್ಟ ಅಜಿತ್ ದೋವಲ್

ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಲು ಯಾರಾದರು ಯತ್ನಿಸಿದರೆ ಅವರನ್ನು ವಿದೇಶಿ ನೆಲದಲ್ಲೂ ನಿಂತು ಎದುರಿಸುವ ತಾಕತ್ತು ಈಗ ಭಾರತಕ್ಕಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪರೋಕ್ಷವಾಗಿ ಚೀನಾಗೆ ಟಾಂಗ್ ನೀಡಿದ್ದಾರೆ. ಭಾರತ ಇಲ್ಲಿಯವರೆಗೂ ಯಾರ ಮೇಲೂ ಮೊದಲಿಗೆ ದಾಳಿ ಮಾಡಿಲ್ಲ. ಆದರೆ ಹೊಸ ಕಾರ್ಯತಂತ್ರದ ಭಾಗವಾಗಿ ಭದ್ರತಾ ಬೆದರಿಕೆಗಳನ್ನು ಎದುರಿಸಲು ನಾವು ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ. ಅಪಾಯ ಎಲ್ಲಿ ಹುಟ್ಟಿಕೊಳ್ಳುತ್ತದೋ ಅಲ್ಲೇ ಭಾರತ ಹೋರಾಡಿ ಅದನ್ನು ನಾಶ ಮಾಡುತ್ತದೆ. ಇದು ಒಬ್ಬ ವ್ಯಕ್ತಿಯ ಹಿತಾಸಕ್ತಿಗಲ್ಲ ಬದಲಾಗಿ ದೇಶದ ಒಳಿತನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತೇವೆ ಎಂದು ಚೀನಾಗೆ ದೋವಲ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಸುಖಾಸುಮ್ಮನೆ ಭಾರತದ ವಿರೋಧ ಕಟ್ಟಿಕೊಂಡರೆ ಚೀನಾಗೆ ಸಂಕಷ್ಟ ಖಂಡಿತ. ಭಾರತವನ್ನು ಕೆಣಕಿದ್ದಕ್ಕೆ ಚೀನಾ ಎಚ್ಚೆತ್ತು ಕೊಳ್ಳದೇ ಇದ್ದರೆ ಮುಂದೇ ಚೀನಾ ಭಾರೀ ಅಪಾಯವನ್ನು ಎದುರಿಸಬೇಕಾದಿತು.

Be the first to comment