ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ಶರಣಾದ ಇಬ್ಬರು ಭಯೋತ್ಪಾದಕರು…

ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯದಿದ್ದರೆ ಇಡೀ ವಿಶ್ವಕ್ಕೆ ಮಾರಕ. ಕೆಲ ಯುವಕರಿಗೆ ಆಮಿಷವನ್ನೊಡ್ಡಿ ಭಯೋತ್ಪಾದನೆಗೆ ಸೆಳೆಯಲಾಗುತ್ತಿದೆ. ಭಾರತೀಯ ಸೇನೆ ಮಾತ್ರ ಅವರನ್ನು ಮನವೊಲಿಸಿ ಭಯೋತ್ಪಾನೆಯಿಂದ ಹೊರಬರುವತ್ತ ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಇತ್ತೀಚಿಗಷ್ಟೇ ಭಯೋತ್ಪಾದನೆಗೆ ಸೇರಿದ ಇಬ್ಬರು ಭಯೋತ್ಪಾದಕರು ಭಾರತೀಯ ಸೇನೆಗೆ ಶರಣಾಗತಿಯಾಗಿದ್ದಾರೆ.

ಹೌದು…ಭದ್ರತಾಪಡೆಗಳು ಭಯೋತ್ಪಾದನೆಯ ಹಾದಿ ಹಿಡಿದ ಯುವಜನತೆಗೆ ಮರಳಿ ಸಮಾಜದ ಮುಖ್ಯವಾಹಿನಿಗೆ ಬಂದು ಬದುಕು ಕಟ್ಟಿಕೊಳ್ಳಲು ಬೇಕಾದ ಎಲ್ಲಾ ನೆರವುಗಳನ್ನು ಭಾರತೀಯ ಸೇನೆ ಒದಗಿಸುತ್ತಿದೆ. ಇಂತಹ ಯುವಕರ ಮನೆಯವರನ್ನು ಸಂಪರ್ಕಿಸಿ ಅವರ ಮೂಲಕ ಉಗ್ರರ ಮನವೊಲಿಸುವ ಕಾರ್ಯವನ್ನು ಕೂಡ ಮಾಡುತ್ತಿದೆ. ಭಾರತೀಯ ಸೇನೆ ಭಯೋತ್ಪಾದನೆಗೆ ಸೇರಿದವರನ್ನು ಗುಂಡಿಕ್ಕಿ ಹತ್ಯೆಗೈಯದೆ ಅವರನ್ನು ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವ ಕೆಲಸವನ್ನೂ ನಮ್ಮ ಸೇನೆ ಮಾಡುತ್ತಿದೆ.

ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಆಧರಿಸಿ, ಜಮ್ಮು-ಕಾಶ್ಮೀರ ವಿಶೇಷ ಕಾರ್ಯಾಚರಣೆ ತಂಡ ಸೊಪೋರ್ ನ ತುಜ್ಜರ್ ಶರೀಫ್ ನಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಸಂದರ್ಭ ಅಲ್ ಬದರ್ ನ ಇಬ್ಬರು ಉಗ್ರರು ಕುಟುಂಬದವರನ್ನು ಅಲ್ಲಿಗೆ ಕರೆತರಲಾಗಿತ್ತು. ಬಳಿಕ ಕುಟುಂಬದ ಮನವಿಲಿಕೆ ಮತ್ತು ಸೇನೆಯ ಮಾತಿಗೆ ಶರಣಾಗಿದ್ದಾರೆ. ಇಬ್ಬರು ಉಗ್ರರನ್ನು ಅಬಿದ್ ಮತ್ತು ಮೆಹ್ರಾಜ್ ಎಂದು ಗುರುತಿಸಲಾಗಿದೆ.

ಈ ಇಬ್ಬರು ಉಗ್ರರ ಕುಟುಂಬಿಕರನ್ನು ಎನ್ಕೌಂಟರ್ ಪ್ರದೇಶಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಉಗ್ರರು ಶರಣಾಗುವಂತೆ ಮಾಡುವುದೇ ಕುಟುಂಬಿಕರನ್ನು ಕರೆದುಕೊಂಡು ಬರಲು ಕಾರಣವಾಗಿತ್ತು. ಕೊನೆಗೂ ಪೊಲೀಸರ ಪ್ರಯತ್ನ ಸಫಲವಾಗಿದೆ.

Be the first to comment