ಭಾರತದ ರಫ್ತು ಸಾಮಥ್ರ್ಯ ಗಣನೀಯ ಏರಿಕೆ ಕಂಡಿದೆ…

ಕೊರೊನಾ ಮಹಾಮಾರಿಯಿಂದಾಗಿ ಇಡೀ ವಿಶ್ವವೇ ತಲ್ಲಣವಾಗಿದೆ. ಅರ್ಥಿಕ ಸ್ಥಿತಿ ಕೂಡಾ ಕಂಗೆಟ್ಟೆ ಹೋಗಿದೆ. ಆದರೆ ಭಾರತ ಕೊರೊನಾ ಮಾಹಾಮಾರಿ ವಿರುದ್ಧ ಜಯಶಾಲಿಯಾಗುತ್ತಿದೆ. ಯಾಕೆಂದರೆ ಚೇತರಿಕೆ ಪ್ರಮಾಣವೂ ಜಾಸ್ತಿಯಾಗುತ್ತಿದೆ ಮರಣ ಪ್ರಮಾಣ ಇಳಿಕೆಯಾಗುತ್ತಿದೆ. ಆರ್ಥಿಕ ಸ್ಥಿತಿಯೂ ಗರಿಗೆದರುತ್ತಿದೆ. ಮತ್ತೊಂದೆಡೆಯಿಂದ ಆಮದು ಕಡಿಮೆಯಾಗಿದೆ ಇತರ ರಾಷ್ಟ್ರಗಳಿಗೆ ರಫ್ತಾಗುವ ಪ್ರಮಾಣ ಜಾಸ್ತಿಯಾಗಿದೆ. ಹೌದು… 2020-21 ವಿತ್ತ ವರ್ಷದ ಮೊದಲ ಆರು ತಿಂಗಳಲ್ಲಿ ಯುಎಸ್ ಮತ್ತು ಚೀನಾಗೆ ಭಾರತದ ರಫ್ತು  ಗಮನಾರ್ಹ ಏರಿಕೆಯನ್ನು ದಾಖಲಿಸಿದೆ ಮತ್ತು ಉಭಯ ರಾಷ್ಟ್ರಗಳಿಂದ ಆಮದು ಗಮನಾರ್ಹ ಕುಸಿತವನ್ನು ಕಂಡಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್ ನಿಂದ ಸೆಪ್ಟೆಂಬರ್ ನಡುವಿನ ಮೊದಲ ಆರು ತಿಂಗಳಲ್ಲಿ ಚೀನಾಗೆ ಭಾರತದ ರಫ್ತು ಶೇಕಡಾ 26.3 ರಷ್ಟು ಏರಿಕೆಯಾಗಿದ್ದು, ಇದು 8.4 ಬಿಲಿಯನ್ ಡಾಲರ್ ನಿಂದ 10.6 ಬಿಲಿಯನ್ ಡಾಲರ್ ಗೆ ಗೆ ಏರಿದೆ. ಅಲ್ಲದೇ, ಇದೇ ಅವಧಿಯಲ್ಲಿ ಚೀನಾದಿಂದ ಆಮದು ಶೇಕಡಾ 24.5 ರಷ್ಟು ಕುಸಿತ ಕಂಡಿದ್ದು, 36.3 ಬಿಲಿಯನ್ ಡಾಲರ್ ನಿಂದ 27.4 ಬಿಲಿಯನ್ ಡಾಲರ್ ಗೆ ಇಳಿದಿದೆ ಎಂದರೆ ಭಾರತ ಎಷ್ಟರ ಮಟ್ಟಿಗೆ ಅಭಿವೃದ್ಧಿಯನ್ನು ಕಂಡಿದೆ ಎನ್ನುವುದು ಬೇರೆ ಸಾಕ್ಷಿ ಬೇಕಾ…

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ತಿಂಗಳ ಸೆಪ್ಟೆಂಬರ್‍ನಲ್ಲಿ ಯುಎಸ್‍ಗೆ ಭಾರತದ ರಫ್ತು ಶೇಕಡಾ 15.5 ರಷ್ಟು ಏರಿಕೆಯಾಗಿದ್ದು, ಇದು 4.4 ಬಿಲಿಯನ್ ಡಾಲರ್‍ನಿಂದ 5.1 ಬಿಲಿಯನ್ ಡಾಲರ್ ಗೆ ಏರಿದೆ. ಅಲ್ಲದೇ, ಇದೇ ಅವಧಿಯಲ್ಲಿ ಯುಎಸ್‍ನಿಂದ ಆಮದು ಶೇಕಡಾ 34.3 ರಷ್ಟು ಕುಸಿದಿದೆ, ಇದು 2.8 ಬಿಲಿಯನ್ ಡಾಲರ್ ನಿಂದ 1.8 ಬಿಲಿಯನ್ ಡಾಲರ್ ಗಳಿಗೆ ಇಳಿದಿದೆ. 2020 ರ ಏಪ್ರಿಲ್-ಸಪ್ಟೆಂಬರ್ ನಲ್ಲಿ ಚೀನಾಕ್ಕೆ ಭಾರತ ಮಾಡುತ್ತಿರುವ ರಫ್ತು 26.3% ರಷ್ಟು ಏರಿಕೆ ಕಂಡಿದೆ.
ಚೀನಾದಿಂದ ಭಾರತಕ್ಕಾಗುವ ಆಮದು 24.5 ರಷ್ಟು ಇಳಿಕೆಯಾಗಿದೆ. ಭಾರತದ ರಫ್ತು ಸಾಮಥ್ರ್ಯ ಹೆಚ್ಚಾಗುತ್ತಿದೆ ಆಮದಾಗುವ ವಸ್ತು ಇಳಿಕೆಯಾಗುತ್ತಿದೆ.

Be the first to comment