ಬಂಧಿತ ಪಿಎಲ್ಎ ಸೈನಿಕನನ್ನು ಚೀನಾಕ್ಕೆ ಹಸ್ತಾಂತರಿಸಿದ ಭಾರತೀಯ ಸೇನೆ…

ಚೀನಾ ಪದೇ ಪದೇ ಭಾರತದ ವಿರೋಧ ನಿಲ್ಲುತ್ತಿದೆ. ಅದರೂ ಭಾರತ ಮಾತ್ರ ಮಾನವೀಯತೆ ತೋರಿಸಿ, ದಾರಿ ತಪ್ಪಿ ಬಂದ ಚೀನಾದ ಯೋಧನನ್ನು ವಾಪಾಸ್ಸು ಚೀನಾ ಸೇನೆಗೆ ಹಸ್ತಾಂತರ ಮಾಡಿದೆ.

ಹೌದು… ಇತ್ತೀಚಿಗಷ್ಟೇ ದಾರಿತಪ್ಪಿ ಭಾರತದ ಗಡಿ ಪ್ರವೇಶಿಸಿದ್ದ ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಸೈನಿಕ ಕೊರ್ಪೊರಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿದೆ. ಈತನನ್ನು ಚುಮರ್-ಡೆಮ್ಚೋಕ್ ಪ್ರದೇಶದಿಂದ ಭಾರತೀಯ ಸೇನೆ ವಶಕ್ಕೆ ಪಡೆದಿತ್ತು.

ಚೀನಾ ನರಿ ಬುದ್ಧಿ ತೋರಿಸಿದರೂ ಶತ್ರು ರಾಷ್ಟ್ರದ ಸೈನಿಕನನ್ನು ಭಾರತೀಯ ಸೇನೆ ಆಹಾರ, ತೀವ್ರ ಚಳಿಯಿಂದ ರಕ್ಷಣೆ ನೀಡುಬ ಬಟ್ಟೆ, ಔಷಧಿ ನೀಡಿ ಉಪಚರಿಸಿ ಭಾರತೀಯ ಸೇನೆ ಮಾನವೀಯತೆ ಮೆರೆದಿದೆ. ಆತನನ್ನು ವಾಪಾಸ್ಸು ಹಸ್ತಾಂತರ ಮಾಡುವಂತೆ ಚೀನಾ ಸೇನೆ ಭಾರತೀಯ ಸೇನೆಯ ಜೊತೆ ವಿನಂತಿಸಿದೆ. ವಿಚಾರಣೆಯ ಬಳಿಕ ಇದೀಗ
ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಇದೀಗ ಆತನನ್ನು ವಾಪಸ್ ಕಳುಹಿಸಿದ್ದಾರೆ. ಚುಶುಲ್ – ಮೊಲ್ಡೊ ಪ್ರದೇಶದಲ್ಲಿ ಸೈನಿಕನನ್ನು ಚೀನಾದ ಅಧಿಕಾರಿಗಳಿಗೆ ನಿನ್ನೆ ರಾತ್ರಿ ಹಸ್ತಾಂತರ ಮಾಡಲಾಗಿದೆ.

Be the first to comment