ಡಿಆರ್‌ಡಿಒ ಖರೀದಿ ಕೈಪಿಡಿ -2020 ಗೆ ಅನುಮೋದನೆ ನೀಡಿದ ರಾಜನಾಥ್ ಸಿಂಗ್

ಕೇಂದ್ರ ಸರ್ಕಾರ ಹೊಸ ಡಿಆರ್‍ಡಿಒ ಖರೀದಿ ಕೈಪಿಡಿ -2020ಗೆ ಅನುಮೋದನೆ ನೀಡಿದೆ. ಇದು ಸ್ಟಾರ್ಟ್‍ಅಪ್‍ಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸೇರಿದಂತೆ ಭಾರತೀಯ ಉದ್ಯಮವನ್ನು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಯಲ್ಲಿ ಹೆಚ್ಚು ಭಾಗವಹಿಸುವಂತೆ ಇದು ಉತ್ತೇಜಿಸುತ್ತದೆ. ಅಲ್ಲದೆ ರಕ್ಷಣೆಯಲ್ಲಿ ಸ್ವಾವಲಂಬನೆಯ ಗುರಿಯನ್ನು ಸಾಧಿಸಲು ಸಹಕಾರಿಯಾಗಲಿದೆ. ಹೊಸ ಡಿಆರ್‍ಡಿಒ ಖರೀದಿ ಕೈಪಿಡಿ ಪ್ರಕ್ರಿಯೆಗಳನ್ನು ಸರಳೀಕರಿಸುವ ಮೂಲಕ ಮತ್ತು ವಿನ್ಯಾಸ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವ ಮೂಲಕ ಸ್ಥಳೀಯ ರಕ್ಷಣಾ ಉದ್ಯಮಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್  ಟ್ವೀಟ್ ಮೂಲಕ ತಿಳಿಸಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಕನಸನ್ನು ನನಸು ಮಾಡಲು ಸಹಕಾರಿಯಾಗಲಿದೆ.

Be the first to comment