ಚೀನಾದ ನರಿ ಬುದ್ಧಿಗೆ ಖಡಕ್ ಪ್ರತ್ಯುತ್ತರ ಕೊಟ್ಟ ಅಮಿತ್ ಶಾ…

ಚೀನಾ ಎಷ್ಟೇ ಶಾಂತಿ ಮಾತುಕತೆ ನಡೆಸಿದರೂ ಅದು ನರಿ ಬುದ್ಧಿ ತೋರಿಸುತ್ತಿದ್ದು ಅದಕ್ಕೆ ಪ್ರತ್ಯುತ್ತರ ಭಾರತೀಯ ಸೇನೆ ನೀಡುತ್ತನೇ ಬರುತ್ತಿದೆ. ಇದೀಗ ಮತ್ತೆ ಶಾಂತಿ ಮಾತುಕತೆ ನಡೆಸುವ ನಾಟಕವಾಡಿ ಯುದ್ಧ ಪರಿಸ್ಥಿತಿಗೆ ಸಿದ್ಧವಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಸೇನೆಗೆ ಸೂಚನೆ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ ಅವರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧ ಎಂದಿದ್ದಾರೆ. ಹೌದು… ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅಮಿತ್ ಶಾ, ಪ್ರತಿ ರಾಷ್ಟ್ರವು ಯುದ್ಧಕ್ಕೆ ಸಿದ್ಧವಾಗಿರುತ್ತದೆ. ಯಾವುದೇ ಅತಿಕ್ರಮಣಕ್ಕೆ ಸ್ಪಂದನೆ ನೀಡುವುದೇ ಸೇನೆಯನ್ನು ಹೊಂದಿರುವ ಉದ್ದೇಶ ಅದೇ ಆಗಿರುತ್ತದೆ. ಭಾರತದ ಸಶಸ್ತ್ರಪಡೆಗಳು ಸದಾ ಸಿದ್ಧವಾಗಿರುತ್ತವೆ. ಇದು ಯಾವುದೋ ಒಂದು ನಿರ್ದಿಷ್ಟ ಹೇಳಿಕೆಗೆ ಸಂಬಂಧಿಸಿದಂತೆ ನಾನು ಹೇಳುತ್ತಿಲ್ಲ ಎಂದಿದ್ದಾರೆ.

ಗಡಿಯಲ್ಲಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಉಭಯ ದೇಶಗಳ ಹಿರಿಯ ಮಿಲಿಟರಿ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಪುನರುಚ್ಚರಿಸುತ್ತೇನೆ. ನಮ್ಮ ಒಂದು ಇಂಚು ಭೂಮಿಯನ್ನು ಕೂಡ ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಗಲ್ವಾನ್ ಕಣಿವೆಯಲ್ಲಿ ಭಾರತದ ತಂಟೆಗೆ ಬಂದಿದಕ್ಕೆ ಈಗ ಚೀನಾ ವಿಲವಿಲ ಒದ್ದಾಡುತ್ತಿದೆ. ಮುಂದೆ ಇದೇ ರೀತಿ ಭಾರತದ ವಿರೋಧ ನಿಂತರೆ ಚೀನಾ ಪರಿಸ್ಥಿತಿ ಇಮ್ಯಾಜಿನ್ ಮಾಡೋಕು ಅಸಾಧ್ಯ.

 

Be the first to comment