ಲಡಾಖ್ ನಲ್ಲಿ ಗಡಿ ಸೇತುವೆ ನಿರ್ಮಾಣ… ಭಾರತದ ಈ ನಡೆಗೆ ಬೆಚ್ಚಿ ಬಿದ್ದಿದೆ ಚೀನಾ….

ಲಡಾಖ್ ಭಾಗದಲ್ಲಿ 8 ಹಾಗೂ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ 8 ಸೇತುವೆಗಳು ಸೇರಿದಂತೆ, ಒಟ್ಟು 44 ಶಾಶ್ವತ ಗಡಿ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೇಶಕ್ಕೆ ಸಮರ್ಪಿಸಿದ ಬೆನ್ನಲ್ಲೇ ಚೀನಾ ಭಾರತದ ಈ ಸಮರ ಸಿದ್ಧತೆಯನ್ನು ಕಂಡು ಬೆಚ್ಚಿದೆ. ಚೀನಾ ಇದೀಗ ಲಡಾಖ್ ಕೇಂದ್ರಾಡಳಿತ ಪ್ರದೇಶ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಹೇಳುವ ಮೂಲಕ,ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಉದ್ಧಟತನ ಮೆರೆದಿದೆ. ಭಾರತದ ವಿರುದ್ಧ ನಿಂತರೆ ಏನಾಗುತ್ತೇ ಅಂತಾ ಇದು ಚೀನಾಗೆ ಭಾರತದ ಜಸ್ಟ್ ಸ್ಯಾಂಪಲ್ ಅಷ್ಟೇ… ಮುಂದಕ್ಕೆ ಇದೆ ಚೀನಾಕ್ಕೇ ಮಾರಿ ಹಬ್ಬ…

ರಕ್ಷಣಾ ಸಚಿವರು ಮೊನ್ನೆ ಉದ್ಘಾಟಿಸಿದ 44 ಸೇತುವೆಗಳಲ್ಲಿ 10 ಕೇಂದ್ರ ಜಮ್ಮು ಮತ್ತು ಕಾಶ್ಮೀರದಲ್ಲಿ, 8 ಲಡಾಖ್‍ನಲ್ಲಿ, ಹಿಮಾಚಲ ಪ್ರದೇಶದಲ್ಲಿ 2, ಪಂಜಾಬ್‍ನಲ್ಲಿ 4, ಉತ್ತರಾಖಂಡದಲ್ಲಿ 8 ಮತ್ತು ಸಿಕ್ಕಿಂನಲ್ಲಿ 4 ಇವೆ. ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಭಾರತದ ಗಡಿ ಪ್ರದೇಶಗಳಲ್ಲಿ ಬಿಆರ್‍ಒ ಕಾರ್ಯತಂತ್ರದ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. ಲಡಾಖ್‍ನಲ್ಲಿ ಹೆಚ್ಚಿನ ಸಂಖ್ಯೆಯ ಸೇತುವೆಗಳು ನಿರ್ಮಾಣ ಹಂತದಲ್ಲಿವೆ. ಸುಮಾರು 40-50 ಸೇತುವೆಗಳು ನಿರ್ಮಾಣ ಹಂತದಲ್ಲಿದ್ದು, ಇದು 6 ತಿಂಗಳಿಂದ ಒಂದೂವರೆ ವರ್ಷಗಳ ನಡುವೆ ಪೂರ್ಣಗೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿ ಮೊನ್ನೆ ತಾನೇ ರೋಹ್ಟಂಗ್ ಸುರಂಗವನ್ನು ಉದ್ಘಾಟಿಸಿದ್ದರು. 10,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಈ ಸುರಂಗವು ಲಡಾಖ್‍ಗೆ ಸೈನ್ಯ ಮತ್ತು ಸಲಕರಣೆಗಳ ಸಾಗಾಣೆಯನ್ನು ಸುಲಭಗೊಳಿಸುತ್ತದೆ. ಇದೂ ಕೂಡಾ ಚೀನಾಕ್ಕೇ ಸಹಿಸಿಕೊಳ್ಳಲಾಗುತ್ತಿಲ್ಲ. ಅದಲ್ಲದೆ ಹಿಮಾಚಲದ ಪ್ರದೇಶದ ಡಾರ್ಚಾದಿಂದ ಲಡಾಖ್ ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. 290 ಕಿ.ಮೀ ಉದ್ದ ಈ ರಸ್ತೆ ಲಡಾಖ್ ನ ಸೇನಾ ನೆಲೆಗಳಿಗೆ ಸೈನಿಕರು ಮತ್ತು ಶಸ್ತ್ರಾಸ್ತ್ರ ಸಾಗಾಟಕ್ಕೆ ಬಹಳ ಸಹಾಯವಾಗುತ್ತದೆ. ಇತ್ತ ಲಡಾಖ್‍ನಲ್ಲಿ ಮಾಡುತ್ತಿರುವ ಒಂದೊಂದು ಅಭಿವೃದ್ದಿ ಕಾರ್ಯಗಳು ಚೀನಾವನ್ನು ನಿದ್ದೆಗೆಡಿಸಿರುವುದು ಅಂತೂ ಅಕ್ಷರಸಃ ಸತ್ಯ…

Be the first to comment