ಮಗುವಿಗೆ ಜನ್ಮ ನೀಡಿದ ಕೇವಲ 14 ದಿನದಲ್ಲೇ ಕೋವಿಡ್ ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ…

ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ  ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಅವರಿಗೆ ಇದೀಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಹೌದು… ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿ ಸೌಮ್ಯ ಪಾಂಡೆ ಎಂಬವರು ತಾನು ಮಗುವಿಗೆ ಜನ್ಮವಿತ್ತರೂ ಕೇವಲ 14 ದಿನಗಳಲ್ಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರು ಗರ್ಭಾವಸ್ಥೆ ಮತ್ತು ಪ್ರಸವದ ಬಳಿಕ ತೆಗೆದುಕೊಂಡ ಒಟ್ಟು ರಜೆಗಳ ಅವಧಿ ಕೇವಲ 22 ದಿನಗಳು ಎಂಬುವುದೇ ವಿಶೇಷ.

ಕೊರೋನಾ ಕಾರಣದಿಂದಾಗಿ ನಮ್ಮ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ ನಾನು ಐಎಎಸ್ ಅಧಿಕಾರಿ, ಹಾಗಾಗಿ ನನ್ನ ಸೇವೆಯ ಕಡೆಗೆ ಗಮನ ಹರಿಸುವುದು ನನಗೆ ಅಗತ್ಯವಾಗಿತ್ತು. ಜನ್ಮ ನೀಡುವ ಹಾಗೂ ಮಗುವಿನ ಆರೈಕೆ ಮಾಡುವ ಸಾಮಥ್ರ್ಯವನ್ನು ದೇವರು ಮಹಿಳೆಯರಿಗೆ ನೀಡಿದ್ದಾನೆ. ಗ್ರಾಮೀಣ ಭಾಗದ ಮಹಿಳೆಯರು ಪ್ರಸವಕ್ಕೂ ಮೊದಲು ಎಲ್ಲಾ ತರನಾದ ಕ್ಲಿಷ್ಟಕರ ಕೆಲಸ ಮಾಡುತ್ತಾರೆ. ಪ್ರಸವದ ಬಳಿಕ ಮಗುವಿನ ಆರೈಕೆ ಜೊತೆಗೆ ಮನೆ ಕೆಲಸವನ್ನು ನಿರ್ವಹಿಸುತ್ತಾರೆ.

ಹಾಗೆಯೇ ದೇವರ ಆಶೀರ್ವಾದದೊಂದಿಗೆ ನಾನು ಕೂಡ ಆಡಳಿತದ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ ಹಾಗೂ ನನ್ನ ಮಗುವಿನ ಆರೈಕೆಯನ್ನು ಮಾಡುತ್ತಿದ್ದೇನೆ ಎಂದಿದ್ದಾರೆ. ನಾನು ಗರ್ಭೀಣಿಯಾಗಿದ್ದಾಗ ಹಾಗೂ ಡೆಲಿವರಿ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಇಡೀ ಆಡಳಿತವರ್ಗ ನನಗೆ ಬೆಂಬಲವಾಗಿ ನಿಂತಿದೆ. ಗಾಜಿಯಾಬಾದ್ ಜಿಲ್ಲಾಡಳಿತ ನನ್ನ ಕುಟುಂಬವಿದ್ದಂತೆ, ನಾನು ಗರ್ಭಿಣಿಯಾಗಿದ್ದಾಗ ಹಾಗೂ ಪ್ರಸವದ ಬಳಿಕವೂ ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ, ಈಗ ಎಲ್ಲರೂ ಇವರ ಸಮಾಜಸೇವೆಗೆ ಶ್ಲಾಘನೆಯ ಮಹಾಪೂರವೇ ಹರಿಯುತ್ತಿದೆ.

 

 

Be the first to comment