ಶಸ್ತ್ರಾಸ್ತ್ರಗಳ ಕಳ್ಳಸಾಗಾಣೆ ಮಾಡುತ್ತಿದ್ದ ಉಗ್ರರ ಯತ್ನವನ್ನು ವಿಫಲ ಮಾಡಿದ ಭಾರತೀಯ ಸೇನೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನ ತನ್ನ ಮಾನ ಕಳೆದುಕೊಂಡರೂ ಸರಿಯಾದ ಹಾದಿಗೆ ಬರೋಲ್ಲ. ತನ್ನ ದೇಶ ಅಭಿವೃದ್ಧಿಯಾಗುವುದ್ದಕ್ಕಿಂತ ಹೆಚ್ಚಾಗಿ ಪಾಕಿಸ್ತಾನಕ್ಕೆ ಉಗ್ರರನ್ನು ಸಲಹುದು, ಉಗ್ರ ಕೃತ್ಯಗಳನ್ನು ಮಾಡಿಸುವುದೇ ಅದಕ್ಕೆ ಉನ್ನತ ಸಾಧನೆಯಾಗಿದೆ. ಜಾಗತಿಕ ಉಗ್ರರ ಚಟುವಟಿಕೆಯ ಮೇಲೆ ಸದಾ ಕಣ್ಣಿಡುವ ಎಫ್ ಟಿಎಫ್ ಎಚ್ಚರಿಸುತ್ತಿದ್ದರೂ ಕ್ಯಾರೇ ಎನ್ನದೆ ಪಾಕಿಸ್ತಾನ ತನ್ನ ಚಾಳಿಯನ್ನು ಮುಂದುವರಿಸುತ್ತಿದೆ. ಇದೀಗ ಮತ್ತೆ ಪಾಕ್ ಸೇನೆಯ ಬೆಂಬಲದೊಂದಿದೆ ಉಗ್ರರು ಶಸ್ತ್ರಾಸ್ತ್ರ ಕಳ್ಳಸಾಗಾಣೆ ಮಾಡಲು ಯತ್ನಿಸಿದ್ದು ಅದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.

ಪಾಕಿಸ್ತಾನ ಸೇನಾ ನೆರವಿನಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುವ ಪಾಕ್ ಉಗ್ರರ ಪ್ರಯತ್ನವನ್ನು ಭಾರತೀಯ ಸೇನೆ ದಕ್ಷಿಣ ಕಾಶ್ಮೀರದ ಕೀರನ್ ವಲಯದಲ್ಲಿ ವಿಫಲಗೊಳಿಸಿದೆ. ನಾಲ್ಕು ಎಕೆ-47 ರೈಫಲ್ಸ್, 8 ಸ್ಫೋಟಕ ವಸ್ತು , 240 ಎಕೆ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಿಶನ್ ಗಂಗಾ ನದಿ ಬಳಿ ಉಗ್ರರ ಚಲನವಲನ ಕಂಡುಬಂದಿತ್ತು. ಇಬ್ಬರಿಂದ ಮೂವರು ಉಗ್ರರು ನದಿಯ ತೀರಕ್ಕೆ ಹಗ್ಗದಿಂದ ಕಟ್ಟಲಾಗಿದ್ದ ಟ್ಯೂಬ್ ಮೂಲಕ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿತ್ತು. ಕೂಡಲೇ ಭಾರತೀಯ ಸೇನೆ ಹಾಗೂ ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಯತ್ನವನ್ನು ವಿಫಲಗೊಳಿಸಿದ್ದಾರೆ.

ಭಾರತೀಯ ಯೋಧರು ಪಾಕ್ ನ ಕುತಂತ್ರವನ್ನು ಮತ್ತೊಮ್ಮೆ ವಿಫಲಗೊಳಿಸಿದ್ದಾರೆ. ಉಗ್ರರನ್ನು ಬೆಂಬಲಿಸಿ ಸಾಕಿ ಸಲಹುವ ಪಾಕಿಸ್ತಾನಕ್ಕೆ ಇಡೀ ವಿಶ್ವವೇ ಛೀಮಾರಿ ಹಾಕಿದರೂ ಬುದ್ಧಿ ಬರುವ ಮಾತೇ ಇಲ್ಲ.

Be the first to comment