“ಗೆಟ್ ಲಾಸ್ಟ್ ಚೀನಾ” ಎಂದು ಪುಟ್ಟ ರಾಷ್ಟ್ರ ತೈವಾನ್ ಚೀನಾದ ವಿರುದ್ಧ ತೊಡೆ ತಟ್ಟಿ ನಿಂತಿದೆ. 

ಚೀನಾ ದಿನಗಳೆದಂತೆ ಎಲ್ಲಾ ಕಡೆ ತನ್ನ ಪಾರುಪತ್ಯ ಸಾಧಿಸಬೇಕೆಂಬ ಭಾರೀ ಹಂಬಲದಲ್ಲಿದೆ. ಅದರಂತೆ ಪಿತೂರಿ ನಡೆಸಲು ಸಾಕಷ್ಟು ಹವಣಿಸುತ್ತಿದೆ. ತೈವಾನ್ ರಾಷ್ಟ್ರವನ್ನು ಸ್ವತಂತ್ರ ರಾಷ್ಟ್ರ ಎಂದು ಘೋಷಣೆ ಮಾಡದೆ ಏಕ ಚೀನಾ ಎಂದು ಘೋಷಿಸಿ ಅಲ್ಲೂ ತನ್ನ ಪಾರುಪತ್ಯ ಸಾಧಿಸಬೇಕೆಂದು ತುದಿಗಾಲಲ್ಲಿ ನಿಂತಿದೆ.ಆದರೆ ತೈವಾನ್ ಮಾತ್ರ ಚೀನಾದ ವಿರುದ್ಧ ತೊಡೆತಟ್ಟಿ ನಿಂತಿದೆ. ಇತ್ತೀಚೆಗೆ ತೈವಾನ್ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಮಾಧ್ಯಮಗಳಲ್ಲಿ ಪುಟಗಟ್ಟಲೆ ಜಾಹೀರಾತು ಪ್ರಕಟ ಮಾಡಿತ್ತು. ಇದನ್ನು‌ ನೋಡಿ ಚೀನಾಗೆ ಉರಿಯಲು ಶುರುವಾಗಿದೆ.

ತೈವಾನ್ ಸ್ವತಂತ್ರ ರಾಷ್ಟ್ರವಲ್ಲ, ಅದು ಚೀನಾದ ಒಂದು ಭಾಗ. ಭಾರತೀಯ ಮಾಧ್ಯಮಗಳು ತಪ್ಪು ಸಂದೇಶವನ್ನು ರವಾನಿಸಬಾರದು ಎಂದಿದೆ. ಏಕ ಚೀನಾ ಎಂದು ಪರಿಗಣಿಸಬೇಕೆಂದು ಚೀನಾ ಖ್ಯಾತೆ ತೆಗೆದಿದೆ. ಅಲ್ಲದೆ ಭಾರತೀಯ ಮಾಧ್ಯಮಗಳು ತಪ್ಪು ಸಂದೇಶ ರವಾನಿಸಬಾರದು ಎಂದು ನವದೆಹಲಿಯಲ್ಲಿ ಚೀನಾ ರಾಯಬಾರಿ ತಿಳಿಸಿದೆ.

ತೈವಾನ್ ಅಂದಿನಿಂದ ಇಂದಿನವರೆಗೂ ಚೀನಾದ ದಬ್ಬಾಳಿಕೆಯನ್ನು ಸಹಿಸುತ್ತಾ ಆ ರಾಷ್ಟ್ರ ಮಾಡುವ ಪಿತೂರಿಯನ್ನು ನೋಡುತ್ತಾ ಬಂದಿದೆ. ಇದೀಗ ಚೀನಾದ ಮಾತಿಗೆ ಪ್ರತಿಕ್ರಿಯೆ ನೀಡಿರುವ ತೈವಾನ್, ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅದಕ್ಕೆ ತನ್ನದೇ ಆದ ಮಾಧ್ಯಮ ಸಿದ್ಧಾಂತಗಳಿವೆ. ಅವುಗಳು ಸ್ವತಂತ್ರ ವರದಿಗಾರಿಕೆಯನ್ನು ಮಾಡುತ್ತಿವೆ. ಗೆಟ್ ಲಾಸ್ಟ್ ಚೀನಾ ಎಂದಿದ್ದು, ಕಮ್ಯೂನಿಸ್ಟ್ ಚೀನಾ ಭಾರತದ ಮೇಲೆ ತನ್ನ ನೀತಿಯನ್ನು ಹೇರಲು ಸಾಧ್ಯವಿಲ್ಲ ಎಂದು ಚೀನಾಕ್ಕೆ ಟಾಂಗ್ ನೀಡಿದೆ.

ಇಂದು ಆ ಪುಟ್ಟ ರಾಷ್ಟ್ರ ಕೂಡಾ ಚೀನಾ ವಿರೋಧ ಕಟ್ಟಿಕೊಂಡಿದೆ. ಯಾಕೆಂದರೆ ಚೀನಾ ಮಾಡುತ್ತಿರುವ ಕುತಂತ್ರ ಇಂದು ಜಗತ್ಜಾಹೀರಾಗುತ್ತಿದೆ. ಪಾಕಿಸ್ತಾನದಂತೆಯೇ ಅದರ ಜೊತೆ ಸೇರಿ ಪಿತೂರಿ ನಡೆಸುತ್ತಿದೆ. ಮುಂದೆ ಇದೇ ರೀತಿ ಮುಂದುವರಿದರೆ ಚೀನಾದ ಸ್ಥಿತಿ ಅದೋಗತಿ.

Be the first to comment