ಇಸಿಸ್ ಜೊತೆ ಸಂಪರ್ಕ ಹೊಂದಿದ್ದ ಮತ್ತಿಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಿದ ಎನ್ಐಎ…

ಭಯೋತ್ಪಾದಕರು ಇಡೀ ವಿಶ್ವಕ್ಕೆ ಮಾರಕ. ಅದನ್ನು ಬೇರುಸಮೇತ ಕಿತ್ತೊಗೆಯಬೇಕು. ಅವರನ್ನು ಬೆಳೆಯಲು ಬಿಟ್ಟರೆ ಮುಂದೆ ಭಾರೀ ಅನಾಹುತ ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಅತ್ತ ಪಾಕಿಸ್ತಾನ ಭಾರತದ ವಿರುದ್ಧ ಉಗ್ರಕೃತ್ಯ ನಡೆಸಲು ಉಗ್ರರನ್ನು ಛೂ ಬಿಡುತ್ತಿದೆ. ಇತ್ತ ಭಾರತದ ಒಳಗೆ ಭಯೋತ್ಪಾದಕ ಕೃತ್ಯ ನಡೆಸಲು, ಭಯೋತ್ಪಾದನಾದತ್ತ ಕೆಲ ಯುವಕರನ್ನು ಸೆಳೆಯಲು ಮುಂದಾಗುತ್ತಿದ್ದವರನ್ನು ಇದೀಗ ಎನ್ಐಎ ಬಂಧಿಸುತ್ತಿದೆ.

ಹೌದು… ರಾಷ್ಟ್ರೀಯ ತನಿಖಾ ಸಂಸ್ಥೆಯು ಭಯೋತ್ಪಾದಕ ಸಂಘಟನೆಗಳ ಸಂಪರ್ಕ ಹೊಂದಿದ್ದ ಅಬ್ದುಲ್ ರೆಹಮಾನ್ ಎಂಬಾತನನ್ನು ಈಗಾಗಲೇ ಬಂಧಿಸಿತ್ತು. ಈತನ ವಿಚಾರಣೆಯ ಸಂದರ್ಭದಲ್ಲಿ ಮತ್ತೆ ಇಬ್ಬರನ್ನಜ ನಿನ್ನೆ ಬಂಧಿಸಲಾಗಿದೆ. ಬಂಧಿತರನ್ನು ಮೊಹಮ್ಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸೀರ್ ಎಂದು ಗುರುತಿಸಲಾಗಿದೆ.

ಬಂಧಿತರಾದ ಈ ಮೂರು ಭಯೋತ್ಪಾದಕ ಶಂಕಿತರು ಹಿಜ್ಬ್ ಉತ್ ತೆಹ್ರಿರ್ ಎಂಬ ಸಂಘಟನೆಯ ಸದಸ್ಯರ ಸಂಪರ್ಕವನ್ನು ಹೊಂದಿದ್ದು ಖುರಾನ್ ಸರ್ಕಲ್ ಎಂಬ ಗುಂಪನ್ನು ಕಟ್ಟಿಕೊಂಡಿದ್ದರು. ಇದರ ಮೂಲಕ ಬೆಂಗಳೂರಿನ ಯುವಕರನ್ನು ಉಗ್ರವಾದದ ಸೆಳೆಯುತ್ತಿದ್ದರು. ಅಲ್ಲದೆ ಸಿರಿಯಾಗೆ ತೆರಳಿ ಅಲ್ಲಿ ಇಸಿಸ್‌ಗಾಗಿ ಹೋರಾಟ ನಡೆಸಲು ಯುವಕರಿಗೆ ನೆರವು ನೀಡುತ್ತಿದ್ದರು ಎಂದು ಹೇಳಲಾಗಿದೆ. ಇದೀಗ ಎನ್ಐಎ ಬಲೆಗೆ ಬಿದ್ದ ಈ ಮೂವರು ಭಯೋತ್ಪಾದಕರಿಗೂ ಸರಿಯಾಗಿಯೇ ಬುದ್ಧಿ ಕಲಿಸಬೇಕು. ಇವರ ಇನ್ನಷ್ಟು ಜಾಲ ಪತ್ತೆ ಮಾಡಿ ಬೇರು ಸಮೇತ ಕಿತ್ತೊಗೆಯಬೇಕು.

Be the first to comment