ಯಾವ ಅಪಾಯದ ಸನ್ನಿವೇಶವನ್ನು ಎದುರಿಸಲೂ ಭಾರತ ಸರ್ವಸನ್ನದ್ಧ – ಏರ್ ಚೀಫ್ ಮಾರ್ಷಲ್‌ ಭದೌರಿಯಾ

ಭಾರತದ ಯಾವತ್ತೂ ಯಾರ ತಂಟೆಗೆ ಹೋಗಲ್ಲ. ಆದರೆ ಕೆಣಕಿದರೆ ಸುಮ್ಮನೆ ಕೂರುವ ಜಾಯಾಮಾನ ಭಾರತಕ್ಕಿಲ್ಲ. ಅಂದಿನಿಂದ ಇಂದಿನವರೆಗಿನ ಯಾವ ಯುದ್ಧವನ್ನು ಗಮನಿಸಿದಾಗಲೂ ಯಾವತ್ತೂ ಭಾರತ ಯಾರ ತಂಟೆಗೂ ಹೋಗಿಲ್ಲ. ಬದಲಾಗಿ ಪಾಕಿಸ್ತಾನ ಚೀನಾದಂತಹ ರಾಷ್ಟ್ರಗಳೇ ಕಾಲ್ಕೆರೆದು ಯುದ್ದ ಮಾಡುವ ಮೊಂಡು ಧೈರ್ಯ ಮಾಡುತ್ತಿದೆ. ಆದರೆ ಕೊನೆಗೆ ಭಾರತದ ಎದುರೇಟಿಗೆ ತಡೆಯಾಗದೆ ಸೋತು ಸುಣ್ಣವಾಗುವುದೂ ಕಾಲ್ಕೆರೆದು ಯುದ್ಧಕ್ಕಿಳಿಯುವ ರಾಷ್ಟ್ರ ಗಳೇ…ಗಡಿಯಲ್ಲಿ ಒಂದು ಕಡೆ ಚೀನಾ ಮೂಗುತುರಿಸುತ್ತಿದ್ದರೆ‌ ಮತ್ತೊಂದೆಡೆ ಪಾಕಿಸ್ತಾನ ನರಿಬುದ್ದಿ ತೋರಿಸುತ್ತಿದೆ. ಅವರಿಗೆಲ್ಲಾ ಸರಿಯಾಗಿಯೇ ಪಾಠ ಕಲಿಸುತ್ತಾ ಬಂದಿದೆ ಭಾರತ.

ಪೂರ್ವ ಲಡಾಖ್‌ನಲ್ಲಿ ಚೀನಾದ ಪಿಎಲ್‌ಎ ಜೊತೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೇ, ಭಾರತೀಯ ವಾಯುಸೇನೆ ಏಕಕಾಲದಲ್ಲಿ ಪಾಕಿಸ್ತಾನ-ಚೀನಾ ವಿರುದ್ಧ ಯುದ್ಧ ಮಾಡಲು ಸರ್ವಸನ್ನದ್ಧವಾಗಿದೆ ಎಂದು ಐಎಎಫ್ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ ಹೇಳಿದ್ದಾರೆ.

ಈ ಕುರಿತಂತೆ ದೆಹಲಿಯಲ್ಲಿ ಮಾತನಾಡಿದ ಆರ್ ಕೆಎಸ್ ಭದೌರಿಯಾ ಅವರು, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಭಾರತದ ವಿರುದ್ಧ ಶತ್ರು ರಾಷ್ಟ್ರಗಳು ಯಾವ ಪಿತೂರಿ ನಡೆಸಿದರೂ ಅದನ್ನು ಹಿಮ್ಮೆಟ್ಟಿಸಲು ಯಾವುದೇ ಸಂಘರ್ಷಕ್ಕೂ ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ. ನಾವು ಯಾವುದೇ ಸಂಘರ್ಷಕ್ಕೆ ಸಿದ್ಧರಾಗಿದ್ದೇವೆ. ಯಾವುದೇ  ಆಕಸ್ಮಿಕತೆಯನ್ನು ಎದುರಿಸಲು ನಾವು ಸಿದ್ಧ ಎಂದು ಭದೌರಿಯಾ ವರ್ಚುವಲ್ ಸಭೆಯಲ್ಲಿ ಹೇಳಿದ್ದಾರೆ. ಅದಲ್ಲದೆ ಸೇನೆಗೆ ಬಲ ತುಂಬಲು ರಫೆಲ್ ಯುದ್ಧ ವಿಮಾನ ಕೂಡಾ ಸೇನೆಗೆ ಸೇರ್ಪಡೆಯಾಗಿದೆ. ಪಾಕ್ ಮತ್ತು ಚೀನಾ ಗಡಿಯಲ್ಲಿ ಪದೇ ಪದೇ ನರಿ ಬುದ್ಧಿ ತೋರಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಯುದ್ಧ ಮಾಡಲು ಸರ್ವಸಿದ್ಧವಾಗಿದ್ದೇವೆ ಎಂದು ಭದೌರಿಯಾ ಪುನರುಚ್ಛರಿಸಿದ್ದಾರೆ.

Be the first to comment