ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ರಾಖಿ ಅಚರಿಸುವಂತಿಲ್ಲ. ಮತ್ತೊಮ್ಮೆ ಹಿಂದೂ ವಿರೋಧಿ ನೀತಿ ಜಾರಿಗೆ ತಂದ ಕೇರಳದ ಕಮ್ಯುನಿಸ್ಟ್ ಸರ್ಕಾರ…

ಕೇರಳ ಸರ್ಕಾರ ಇದೀಗ ಮತ್ತೊಮ್ಮೆ ಹಿಂದೂ ವಿರೋಧಿ ಎಂಬುವುದನ್ನು ಸಾಭೀತು ಮಾಡಿದೆ. ಹೇಗಂತಾ ಯೋಚಿಸ್ತಾ ಇದ್ದೀರಾ?

ಈ ಮೊದಲು ಕೂಡಾ ಹಿಂದೂ ವಿರೋಧಿ ನೀತಿಯನ್ನು ಜಾರಿಗೆ ತಂದಿದೆ. ಇದೀಗ ಮತ್ತೊಂದು ಹೊಸ ವರಸೆ ಆರಂಭಿಸಿದೆ‌. ಅಣ್ಣ ತಂಗಿಯರ ಪವಿತ್ರ ಬಾಂಧವ್ಯದ ಸಂಕೇತವಾಗಿರುವ ರಕ್ಷಾ ಬಂಧನವನ್ನು ಇಡೀ ದೇಶದ ಜನತೆ ಆಚರಿಸುತ್ತಾರೆ. ಪ್ರಧಾನ ಮಂತ್ರಿ, ರಾಷ್ಟ್ರಪತಿಯವರು ಎಲ್ಲಾರೂ ಅತ್ಯಂತ ಉತ್ಸಾಹದಿಂದ ಆ ದಿನವನ್ನು ಆಚರಿಸುತ್ತೇವೆ. ಅದೇ ಕೇರಳದ ಕಮ್ಯುನಿಸ್ಟ್ ಪಕ್ಷ ಮಾತ್ರ ಕೇರಳದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಯಾರೂ ಕೂಡಾ ರಕ್ಷಾ ಬಂಧನವನ್ನು ಆಚರಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಹೌದು… ಕೇರಳದ ವೈದ್ಯಕೀಯ ಕಾಲೇಜುಗಳಲ್ಲಿ ರಕ್ಷಾ ಬಂಧನ ಅಚರಿಸದಂತೆ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ರಾಮ್ಲಾ ಬೀವಿ ಈ ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜು‌ಗಳಲ್ಲಿ ರಕ್ಷಾ ಬಂಧನ ಆಚರಣೆ ಮಾಡುವಂತಿಲ್ಲ ಎಂದು ಈ ಆದೇಶದಲ್ಲಿ ತಿಳಿಸಿದ್ದಾರೆ.
ಅಲ್ಲಿನ ಸರ್ಕಾರ ಮತ್ತು ಶಿಕ್ಷಣ ಸಚಿವಾಲಯದ ಆದೇಶದನ್ವಯ ಈ ನೀತಿಯನ್ನು ಜಾರಿಗೆ ತರಲಾಗಿದೆ.

ಅದರಂತೆ ಕೇರಳದ ಯಾವುದೇ ಸರ್ಕಾರಿ ವೈದ್ಯಕೀಯ, ನರ್ಸಿಂಗ್, ದಂತವೈದ್ಯಕೀಯ ಕಾಲೇಜು‌ಗಳಲ್ಲಿ ರಕ್ಷಾ ಬಂಧನ ಆಚರಣೆಗೆ ಅನುಮತಿ ಇಲ್ಲ ಎಂದು ತಿಳಿಸಿದೆ. ಈ ಆದೇಶಕ್ಕೆ ಸಂಬಂಧಿಸಿದಂತೆ ಡಾ. ರಾಮ್ಲಾ ಬೀವಿ ಹೇಳಿಕೆ ನೀಡಿದ್ದು, ಇದು ಹಿಂದೂ ಧರ್ಮದ ಆಚರಣೆಯಾಗಿದ್ದು ಆದ್ದರಿಂದ ನಿಷೇಧ ಮಾಡಿರುವುದಾಗಿಯೂ ಹೇಳಿದ್ದಾರೆ.

ಕಳೆದ ವರ್ಷ ಕೇರಳದ ಕಾಲೇಜು‌ಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು, ವಿದ್ಯಾರ್ಥಿಗಳು ರಕ್ಷಾ ಬಂಧನ ಆಚರಣೆ ಮಾಡಿದ್ದರು. ಈ ಬಾರಿ ಈ ಅವಕಾಶವನ್ನು ತಡೆಯುವ ಹಿನ್ನೆಲೆಯಲ್ಲಿ ಕೇರಳ ಎಡಚರ  ಸರ್ಕಾರ ಇಂತಹ ನಿಲುವನ್ನು ಪ್ರದರ್ಶನ ಮಾಡಿದೆ ಎನ್ನಲಾಗಿದೆ. ಅಣ್ಣ ತಂಗಿಯರ ಬಾಂಧವ್ಯ ಸಾರುವ ಈ ರಕ್ಷಾ ಬಂಧನವನ್ನು ಕೇರಳ ಸರ್ಕಾರ ನಿಷೇಧಿಸಬೇಕಾದರೆ ಅವರ ಮನಸ್ಥಿತಿ ಎಂತಹುದು ಎಂದು ಊಹಿಸೋಕೂ ಅಸಾಧ್ಯ.

Be the first to comment