ಹುತಾತ್ಮ ಯೋಧರ ನೆನಪಿಗಾಗಿ ಲಡಾಖ್‍ನಲ್ಲಿ ನಿರ್ಮಾಣವಾಗಿದೆ ಸ್ಮಾರಕ…

ಗಲ್ವಾನ್ ಕಣಿವೆಯಲ್ಲಿ ಚೀನಾದ ನರಿ ಬುದ್ಧಿಯಿಂದಾಗಿ ನಾವು 20 ಯೋಧರನ್ನು ಕಳೆದುಕೊಳ್ಳಬೇಕಾಯಿತು. ಇದೀಗ ಹುತಾತ್ಮ ಯೋಧರ ನೆನಪಿಗಾಗಿ ಗಾಲ್ವಾನ್ ಕಣಿವೆಯಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಡರ್ಬುಕ್-ಷ್ಯೋಕ್-ದೌಲತ್ ಬೇಗ್ ಓಲ್ಡೀ, ಲಡಾಖ್ ನ ಕೆಎಂ-120 ಪೋಸ್ಟ್ ಬಳಿಯಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಅಲ್ಲಿ 20 ಹುತಾತ್ಮ ಯೋಧರ ಹೆಸರನ್ನು ಘಟನೆ ಸಹಿತ ಬರೆಯಲಾಗಿದೆ.

ಜೂನ್ 15, 2020 ರಂದು ಗಲ್ವಾನ್ ಕಣಿವೆಯಲ್ಲಿ ಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಅವರ ನೇತೃತ್ವದ ಭಾರತೀಯ ಯೋಧರು, ಗಾಲ್ವಾನ್‌ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಜೊತೆಗೆ ಹೋರಾಡಿ ಪಾಯಿಂಟ್ 14 ರಿಂದ ಮುಂದೆ ಬರುವ ಪಿಎಲ್‍ಎಯ ಯತ್ನವನ್ನು ತಡೆಗಟ್ಟಿದ್ದರು. ಪಿಪಿ 14 ರ ಬಳಿ ಪಿಎಲ್‍ಎ ಸೈನಿಕರು ಮುಂದೆ ಬಂದಾಗ ಘರ್ಷಣೆ ಉಂಟಾಗಿದ್ದು, ಪಿಎಲ್‍ಎ ಯತ್ನವನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ಯೋಧರು ಧೈರ್ಯದಿಂದ ಹೋರಾಡಿದ್ದರು.

ಅದೇ ಸಂದರ್ಭದಲ್ಲಿ 20 ಯೋಧರನ್ನು ಕಳೆದುಕೊಳ್ಳಬೇಕಾಯಿತು. ಈ ಸ್ಮಾರಕದಲ್ಲಿ ಆಪರೇಷನ್ ಸ್ನೋ ಲೆಪರ್ಡ್‍ನ ಸಂಪೂರ್ಣ ಮಾಹಿತಿಯನ್ನು ಸ್ಮಾರಕದ ಬಳಿ ಕಲ್ಲಿನಲ್ಲಿ ಕೆತ್ತಲಾಗಿದೆ. ಇನ್ನೊಂದು ಕಲ್ಲಿನಲ್ಲಿ ಈ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಹೆಸರುಗಳು ಮತ್ತು ಅವರು ಕಾರ್ಯ ನಿರ್ವಹಿಸುತ್ತಿದ್ದ ರೆಜಿಮೆಂಟ್‍ಗಳ ಮಾಹಿತಿಯನ್ನು ಕೆತ್ತಲಾಗಿದೆ. ಯೋಧರು ತಮ್ಮ ಪ್ರಾಣ ಒತ್ತೆ ಇಟ್ಟು ತಾಯಿ ನಾಡಿಗಾಗಿ, ನೆಲಕ್ಕಾಗಿ ಹೋರಾಡಿದ ಪ್ರತೀ ಯೋಧರನ್ನು ಮರೆಯದಿರೋಣ.

Be the first to comment