ಕಾಶ್ಮೀರ ವಿಚಾರ ಸುಳ್ಳು ಸುದ್ಧಿ ಹಬ್ಬಿಸಿದ ಪಾಕ್ ಗೆ ಭಾರತ ತಿರುಗೇಟು! ನಮ್ಮ ಕಾಶ್ಮೀರದ ಬಗ್ಗೆ ಮಾತನಾಡುವ ಬದಲು ನಿಮ್ಮೊಳಗಿನ ಹಿಂಸಾಚಾರವನ್ನು ನೋಡಿ…

ಆರ್ಟಿಕಲ್ 370 ರದ್ದಾದ ಬಳಿಕ ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ಹೆಚ್ಚಿನ ಭದ್ರತೆ ನೀಡಿದ್ದು ಅಲ್ಲಿನ ಪರಿಸ್ಥಿತಿ ಶಾಂತಿಯುತವಾಗಿದೆ. ಎಂದಿನಂತೆ ಶಾಲಾ ಕಾಲೇಜುಗಳು ಅಂಗಡಿ ಮುಂಗಟ್ಟುಗಳು ತೆರೆದಿದ್ದು ಅಲ್ಲಿನ ಜನತೆ ನೆಮ್ಮದಿಯಿಂದ ಈಗ ಜೀವನ ನಡೆಸುವಂತಾಗಿದೆ. ಆದರೆ ಪಾಕಿಸ್ತಾನ ಮಾತ್ರ ವಿಶ್ವದೆದುರು ಸುಖಾಸುಮ್ಮನೆ ಕಾಶ್ಮೀರದಲ್ಲಿ ಮತ್ತಷ್ಟು ಪರಿಸ್ಥತಿ ಕ್ಷೀಣವಾಗಿದೆ ಎಂದು ಸುಳ್ಳು ಸುದ್ಧಿಯನ್ನು ಹಬ್ಬಿಸುತ್ತಿದೆ. ಆದರೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀ ನಗರದ ಜಿಬಿ ಪಂತ್ ಆಸ್ಪತ್ರೆಯ ಬಳಿಯಲ್ಲಿ ನಾಗರಿಕರು ಮುಕ್ತವಾಗಿ ಓಡಾಡುವ ದೃಶ್ಯವುಳ್ಳ ವಿಡಿಯೋವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ಅಧಿಕಾರಿ ಕಶ್ಯಪ್ ಕಡಗತ್ತೂರು ಅವರು ಬುಧವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರು, ಸಾರಿಗೆ ಸಂಚಾರ ಮತ್ತು ರಸ್ತೆಬದಿಯ ತ್ಳುಗಾಡಿಯ ವ್ಯಾಪಾರಿಗಳು ಸಹಜವಾಗಿ ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾಗಿರುವುದನ್ನು ಕಶ್ಯಪ್ ತೋರಿಸಿದ್ದಾರೆ. ಮಾತ್ರವಲ್ಲ ಇದಕ್ಕೆ ಪೂರಕವಾಗಿ ದಿನದ ಪತ್ರಿಕೆಯ ಸುದ್ದಿಗಳನ್ನೂ ತೋರಿಸಿದ್ದಾರೆ. ಕಣಿವೆಯಲ್ಲಿ ಭಯ ಮತ್ತು ನಿಷೇಧ ಇನ್ನೂ ಮುಂದುವರೆದಿದೆ ಎಂದು ಹೇಳುತ್ತಿರುವವರಿಗೆ ಈ ವೀಡಿಯೋ ಸತ್ಯದ ದರ್ಶನ ಮಾಡಿಸಿದೆ. ಆದರೂ ಪಾಕಿಸ್ತಾನ ವಿಶ್ವದೆದುರು ಕಾಶ್ಮೀರ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಲೇ ಇದೆ…

ಪಾಕಿಸ್ತಾನಕ್ಕೆ ಭಾರತ ತಿರುಗೇಟು…

ಪದೇ ಪದೇ ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸುವ ಪಾಕಿಸ್ಥಾನಕ್ಕೆ ಭಾರತ ಸರಿಯಾಗಿ ಚಾಟಿ ಬೀಸಿದೆ. ನಮ್ಮ ಕಾಶ್ಮೀರದ ವಿಚಾರಕ್ಕೆ ಬರುವುದಕ್ಕೆ ಮೊದಲು ನಿಮ್ಮ ದೇಶದಲ್ಲಿರುವ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಹಿಂಸಾಚಾರದ ಬಗ್ಗೆ ಗಮನ ಹರಿಸಿ ಎಂದು ಭಾರತ ವಿಶ್ವ ಸಂಸ್ಥೆಯ ಸಭೆಯಲ್ಲಿ ಪಾಕಿಸ್ಥಾನಕ್ಕೆ ತಿರುಗೇಟು ನೀಡಿದೆ. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಅಧಿವೇಶನದಲ್ಲಿ ಮಾತನಾಡಿದ ಭಾರತದ ಕುಮಾಮ್ ಮಿನಿ ದೇವಿ, ಪಾಕಿಸ್ಥಾನ ಕಾಶ್ಮೀರದ ವಿಷಯದಲ್ಲಿ ಮತ್ತೆ ಮತ್ತೆ ತಪ್ಪು ಮಾಹಿತಿಯನ್ನು ಜಗತ್ತಿನ ಮುಂದಿಡುತ್ತಿದೆ. ಅದರ ಬದಲು ಪಾಕ್ ಆಕ್ರಮಿತ ಕಾಶ್ಮೀರ, ಖೈಬರ್ ಪ್ರಾಂತ್ಯ, ಬಲೂಚಿಸ್ಥಾನ ಮತ್ತು ಸಿಂಧ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಕಗ್ಗೊಲೆಗಳು, ಹಿಂಸಾಚಾರಗಳ ಬಗ್ಗೆ ಗಮನಹರಿಸುವುದು ಒಳಿತು ಎಂದರು. ಆದರೆ ಪಾಕಿಸ್ತಾನವನ್ನು ಇಡೀ ವಿಶ್ವವೇ ಇದೀಗ ಛೀ ಅಂತಾ ಅಂತಾ ಉಗಿದರೂ ಅದಕ್ಕೆ ಬುದ್ಧಿ ಬರೋದೇ ಇಲ್ಲ ಅಂದನಿಸುತ್ತಿದೆ.

Be the first to comment