ಮೋದಿಜೀ ಬಗ್ಗೆ ಕಾಶ್ಮೀರಿಗನ ಮಾತನ್ನೊಮ್ಮೆ ಕೇಳಿ….

ಪ್ರಧಾನಿ ನರೇಂದ್ರ ಮೋದಿಯವರು ಆರ್ಟಿಕಲ್ 370 ಯನ್ನು ರದ್ದು ಮಾಡಿರುವುದು ರಾಜಕೀಯ ದೃಷ್ಟಿಯಿಂದ ಅಲ್ಲ ಬದಲಾಗಿ ದೇಶದ ಅಭಿವೃದ್ಧಿಗೋಸ್ಕರ… ನೆಹರೂವಿನ ಪಿತೂರಿಯಿಂದ ಕಾಶ್ಮೀರಕ್ಕೆ ಆರ್ಟಿಕಲ್ 370 35(ಎ) ಎಂಬ ವಿಶೇಷಾಧಿಕಾರವನ್ನು ಕೊಟ್ಟು ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರವನ್ನು ನಮ್ಮಿಂದ ದೂರ ತಳ್ಳಿಬಿಟ್ಟರು. ಆದರೆ ಇದೊಂದು ಕಾಶ್ಮೀರಕ್ಕೆ ಅಂಟಿದ್ದ ಶಾಪವಾಗಿ ಪರಿಣಮಿಸಿಬಿಟ್ಟಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರಕ್ಕೆ ಅಂಟಿದ್ದ ಶಾಪವನ್ನು ವಿಮೋಚನೆಗೊಳಿಸುವ ಮೂಲಕ ಕಾಶ್ಮೀರಿಗರ ಮೊಗದಲ್ಲಿ ಸಂತೋಷವನ್ನುಂಟು ಮಾಡಿದ್ದಾರೆ. ಅಲ್ಲದೆ ಜಮ್ಮು ಕಾಶ್ಮೀರ ಮುಂದೆ ಬೃಹತ್ ಬದಲಾವಣೆಯನ್ನು ತರಬೇಕೆಂದು ಅವರ ಮುಂದಿನ ಗುರಿ.. ಕಲಂ 370 ರದ್ದಾಗುತ್ತಿದ್ದಂತೆ ಕೆಲ ದೇಶದ್ರೋಹಿಗಳು ಕಾಶ್ಮೀರದಲ್ಲಿ ಹಾಗಾಗುತ್ತೆ ಹೀಗಾಗುತ್ತೆ ಅಂತಾ ಸುಳ್ಳು ಸುದ್ಧಿ ಹಬ್ಬಿಸಿದ್ರು…ಆದ್ರೆ ಈಗ ಕಾಶ್ಮೀರವನ್ನೊಮ್ಮೆ ನೋಡಿ! ತುಂಬಾ ಶಾಂತಿಯುತವಾಗಿದೆ… ಇದೆಲ್ಲಾ ಮೋದಿಯಂತಹ ಮನುಷ್ಯ ಪ್ರಧಾನಿ ಪಟ್ಟದಲ್ಲಿರುವಾಗ ಮಾತ್ರ ಸಾಧ್ಯ…ಹಾಗೇ ಮೋದಿ ಸರಕಾರದ ಮೇಲೆ ಅಲ್ಲಿನ ಜನರ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ.

ಹೌದು… ಪುಲ್ವಾಮ ಜಿಲ್ಲೆಯ ವ್ಯಾಪ್ತಿಗೆ ಬರುವ ಕಾಶ್ಮೀರದ ಟ್ರಾಲ್ ನ ಸ್ಥಳೀಯ ನಿವಾಸಿಯೊಬ್ಬರು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತಾನೂ ಸಂಪೂರ್ಣ ನಂಬಿಕೆ ಹೊಂದಿರುವುದಾಗಿ ಮತ್ತು ಜನರ ಕಲ್ಯಾಣಕ್ಕಾಗಿ ಅದು ಕೆಲಸ ಮಾಡುತ್ತಿದೆ ಎಂಬ ವಿಶ್ವಾಸ ನನಗಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇಡೀ ಕಾಶ್ಮೀರಿಗರು ಮೋದಿ ಒಬ್ಬ ಒಳ್ಳೆಯ ಮನುಷ್ಯ ಎಂದು ಅವರು ಕರೆದಿದ್ದಾರೆ. ಮುಂದೆ ಸ್ಥಳೀಯ ಶಾಲೆಗಳ ಸುಧಾರಣೆಯಾಗಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಆಹಾರಗಳನ್ನು ಒದಗಿಸಬೇಕು ತಮ್ಮ ಗ್ರಾಮದ ಪಶುಸಂಗೋಪನಾ ಕೇಂದ್ರಗಳನ್ನು ಸುಧಾರಿಸಬೇಕು ಮತ್ತು ಮಕ್ಕಳಿಗೆ ಆಟವಾಡಲು ಸ್ಥಳಾವಕಾಶ ಮಾಡಿಕೊಡಬೇಕು ಎಂಬಿತ್ಯಾದಿ ಕೆಲವು ಬೇಡಿಕೆಗಳನ್ನು ಅವರು ಮೋದಿ ಸರ್ಕಾರಕ್ಕೆ ಮಾಡಿದ್ದಾರೆ. ನಿಜಕ್ಕೂ ಮೋದಿ ಸರ್ಕಾರ ಲಡಾಖ್ ಜಮ್ಮು ಕಾಶ್ಮೀರವನ್ನು ಮುಂದಿನ ದಿನಗಳಲ್ಲಿ ಬೃಹತ್ ಬದಲಾವಣೆಯನ್ನು ಮಾಡುವ ವಿರೋಧಿಗಳಿಗೆ ಶಾಕ್ ನೀಡೋದು ಖಂಡಿತ…

Be the first to comment