ಜಮ್ಮು ಕಾಶ್ಮೀರದ ಅಭಿವೃದ್ಧಿಯತ್ತ ಮೋದಿ ಸರಕಾರದ ಚಿತ್ತ..

ಈವರೆಗೆ ಕಾಶ್ಮೀರಕ್ಕೆ ಅಂಟಿದ್ದ ಶಾಪ ಕೊನೆಗೂ ಮೋದಿಜೀಯಿಂದ ವಿಮೋಜನೆಯಾಯಿತು. ಒಂದೇ ದೇಶವಾದರೂ ಕಾಶ್ಮೀರಕ್ಕೆ ಮಾತ್ರ ವಿಶೇಷ ಸ್ಥಾನಮಾನ ನೀಡಿ ಎಲ್ಲದರಿಂದರೂ, ಹಾಗೂ ಎಲ್ಲಾ ಸೌಲಭ್ಯಗಳಿಂದಲೂ ವಂಚಿತರನ್ನಾಗಿ ಮಾಡಿತ್ತು! ಸುಮಾರು ದಶಕಗಳಿಂದ ಕಾಶ್ಮೀರದ ಜನ ಪಟ್ಟ ವೇದನೆ ನಿಜಕ್ಕೂ ಹೇಳತೀರದು. ಆದರೆ ಇನ್ನು ಮುಂದೆ ಕಾಶ್ಮೀರ ಲಡಾಖ್ ಮಹತ್ತರ ಬದಲಾವಣೆಯಾಗೋದು ಖಂಡಿತ! ಯಾಕೆಂದರೆ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಹಿಂಪಡೆದು ಅದನ್ನು ಎರಡು ಕೇಂದ್ರಾಡಳಿತವನ್ನಾಗಿ ವಿಭಜನೆ ಮಾಡಿರುವ ಕೇಂದ್ರ ಸರ್ಕಾರ ಇದೀಗ ಕಾಶ್ಮೀರ ಕಣಿವೆಯಲ್ಲಿನ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದೆ.

ಕಾಶ್ಮೀರ ಕಣಿವೆಯ ಶ್ರೀನಗರ ಮೆಟ್ರೋ ಯೋಜನೆಯನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರ ಸಂಬಂಧಪಟ್ಟುವವರಿಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರದ ಹಿನ್ನಲೆಯಲ್ಲಿ ಸಿವಿಲ್ ಎಂಜಿನಿಯರ್ಗಳು ವಾಸ್ತು ಶಲ್ಪಿಗಳು ಸಿಗ್ನಲ್ ಎಲೆಕ್ಟ್ರಿಷಿಯನ್ ದೂರಸಂಪರ್ಕ ತಜ್ಞರು ಸೇರಿದಂತೆ ಸುಮಾರು 1,300 ಸಿಬ್ಬಂದಿಯನ್ನು ಶ್ರೀನಗರ ಮೆಟ್ರೋ ಯೋಜನೆಗೆ ನೇಮಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಈ ನಿರ್ಧಾರವು ಕೇಂದ್ರಾಡಳಿತ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧತೆಯನ್ನು ತೋರಿಸುತ್ತದೆ ಎಂಬ ಭರವಸೆಯನ್ನು ದೃಢಪಡಿಸಿದೆ. ಮಾತ್ರವಲ್ಲದೆ ಸಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ಜಮ್ಮು ಕಾಶ್ಮೀರ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ಕಣಿವೆ ರಾಜ್ಯದ ಮೊದಲ ಹೂಡಿಕೆದಾರರ ಸಮಾವೇಶವಾಗಲಿದೆ. ಶ್ರೀನಗರ ಮೆಟ್ರೋದ ಒಟ್ಟು ವೆಚ್ಚ 5,108 ಕೋಟಿ ರೂ ಎಂದು ಅಂದಾಜಿಸಲಾಗಿದ್ದು ಈ ಮೆಟ್ರೋ ಜಾಲವು ಎರಡು ಉಪ ಕಾರಿಡಾರ್‍ಗಳನ್ನು ಒಳಗೊಂಡಿರುತ್ತದೆ, ಒಂದು ಇಂದಿರಾ ನಗರದಿಂದ ಎಚ್‍ಎಂಟಿ ಜಂಕ್ಷನ್‍ವರೆಗೆ ಮತ್ತು ಇನ್ನೊಂದು ಹುಜುರಿಬಾಗ್‍ನಿಂದ ಉಸ್ಮಾನಾಬಾದ್‍ಗೆ ಸಂಚರಿಸಲಿದೆ.

ಭೌಗೋಳಿಕವಾಗಿ ವಿಶಿಷ್ಟವಾಗಿರುವ ಲಡಾಖ್ ಪ್ರದೇಶ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಇನ್ನು ಶೈಕ್ಷಣಿಕ ಸಂಸ್ಥೆಗಳನ್ನು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಉದ್ಯಮಗಳನ್ನು ಕರೆತರಲಾಗುವುದು. ಸ್ಥಳೀಯ ಹರ್ಬಲ್ ಔಷಧಕ್ಕೆ ಭಾರಿ ಬೇಡಿಕೆಯಿದ್ದು, ಅವುಗಳಿಗೆ ಜಾಗತಿಕ ಮಾರುಕಟ್ಟೆ ದೊರೆಯುವಂತೆ ಪೆÇ್ರೀತ್ಸಾಹ ನೀಡಲಾಗುವುದು. ಇಲ್ಲಿನ ವಿಶಿಷ್ಟ ಸಂಸ್ಕೃತಿ, ಪರಂಪರೆಯ ರಕ್ಷಣೆಯೊಂದಿಗೆ ಉಜ್ವಲ ಭವಿಷ್ಯವನ್ನು ನಿರ್ಮಿಸಲಾಗುವುದು. ಲಡಾಖ್ ಈಗ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಇಲ್ಲಿನ ಅಭಿವೃದ್ಧಿಯ ಸಂಪೂರ್ಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು ಲಡಾಖ್ ಹಾಗೂ ಕಾಶ್ಮೀರವನ್ನು ತೀವ್ರಗತಿಯಲ್ಲಿ ಅಭಿವೃದ್ಧಿ ಪಡಿಸುವುದೇ ಮೋದಿ ಸರ್ಕಾರದ ಗುರಿಯಾಗಿದೆ. ಇನ್ಮುಂದೆ ಕಾಶ್ಮೀರದ ಮೆರುಗೇ ವಿಭಿನ್ನ ರೀತಿಯಲ್ಲಿರುತ್ತೆ..

Be the first to comment