ಮಕ್ಕಳ ಮಾರಾಟದ ವೇಳೆ ಸಿಲುಕಿ ಬಿದ್ದ ಕ್ರೈಸ್ತ್ ಮಶಿನರಿಗಳ ಸನ್ಯಾಸಿಗಳು

ರಾಂಚಿ: ಇತ್ತೀಚೆಗೆ ಕೇರಳದಲ್ಲಿ ಕ್ರೈಸ್ತ ಪಾದ್ರಿಯೊಬ್ಬರ ಮೇಲೆ ಸನ್ಯಾಸಿನಿ ಅತ್ಯಾಚಾರ ಆರೋಪ ಎದುರಾಗಿರುವ ಬೆನ್ನಲ್ಲೇ ಮಕ್ಕಳನ್ನು ಮಾರಾಟ ಮಾಡುವ ವೇಳೆ ಕ್ರೈಸ್ತ ಮಶಿನರಿಗಳ ಸನ್ಯಾಸಿಗಳಿಬ್ಬರ ಪೊಲೀಸರ ಕೈಗೆ ಸಿಲುಕಿ ಬಿದ್ದಿದ್ದಾರೆ, ಗುರುವಾರ ರಾಂಚಿಯಲ್ಲಿ ಇಬ್ಬರು ಕ್ರೈಸ್ತ ಸನ್ಯಾಸಿಗಳನ್ನು ಮಕ್ಕಳ ಮಾರಾಟದ ಆರೋಪದಲ್ಲಿ ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ, ಜಾರ್ಖಂಡ್ ಮೂಲಕ ಉತ್ತರ ಪ್ರದೇಶಕ್ಕೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ರಾಂಚಿಯ ನಾನಾ ಕಡೆ ಮಕ್ಕಳ ಮಾರಾಟ ಜಾಲವನ್ನು ಜಾರ್ಖಂಡ್ ಪೊಲೀಸರು ಪತ್ತೆ ಹಚ್ಚಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ,

ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಕ್ಕಳ ಕಲ್ಯಾಣ ಅಭಿವೃದ್ಧಿ ಮತ್ತು ಮಕ್ಕಳ ರಕ್ಷಣಾ ಕಾಯಿದೆ ಪ್ರಕಾರ ಕಲಂ 370 ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಇಡೀ ಮಕ್ಕಳ ಮಾರಾಟ ಜಾಲದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದಿಂದ ಮಕ್ಕಳನ್ನು ಖರೀದಿಸಲಾಗಿದ್ದು, 1.2 ಲಕ್ಷ ರೂಪಾಯಿಗಳಿಗೆ ಮಕ್ಕಳನ್ನು ಖರೀದಿಸಲಾಗಿದೆ. ಪೋಷಕರೇ ಮಕ್ಕಳನ್ನು ಮಾರಾಟ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ಬಂಧಿತ ಕ್ರೈಸ್ತ್ ಸನ್ಯಾಸಿಯರು ಬಾಯ್ಬಿಟ್ಟಿದ್ದಾರೆ. ಈ ಕುರಿತು ಮಶಿನರಿಯ ಸಿಸ್ಟರ್ ಪ್ರೇಮಾ, ಚಾರಿಟಿ ನೈತಿಕತೆಯ ಆಧಾರದಲ್ಲಿ ನಡೆಯುತ್ತಿದೆ. ಒಂದು ವೇಳೆ ಇಂತಹ ಘಟನೆ ನಡೆದಿದ್ದರೇ ಅದಕ್ಕೂ ಚಾರಿಟಿಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

Be the first to comment