35 ವರ್ಷದಿಂದ ಜನರಲ್ ಬಿಪಿನ್ ರಾವತ್ ಅವರು ಸಿನೆಮಾ ನೋಡಿಲ್ಲ. ಕಾರಣ ಕೇಳಿದರೇ ಹೆಮ್ಮೆ ಎನಿಸುತ್ತೆ

ದೆಹಲಿ: ಭಾರತೀಯ ಸೈನಿಕರು ತಮ್ಮ ಕುಟುಂಬವನ್ನು ಬಿಟ್ಟು, ತಮ್ಮ ಪ್ರಾಣ ಪಣಕ್ಕಿಟ್ಟು ದೇಶ ರಕ್ಷಣೆಗೆ ಹೋರಾಡುತ್ತಾರೆ. ಅದರ ಜೊತೆಗೆ ಆಗಾಗ ಸ್ವಲ್ಪ ಮನರಂಜನೆಗೆ ತಮ್ಮ ಶಿಬಿರದಲ್ಲೇ ಹಾಡು, ಕುಣಿತ ಮಾಡುತ್ತಾರೆ. ಇದೂ ಕೂಡ ವಿರಳಾತೀ ವಿರಳ ಎನ್ನಬಹುದು. ಇನ್ನು ಪ್ರಸ್ತುತ ದಿನಗಳಲ್ಲಿ ಯಾವುದೇ ಹುದ್ದೇಯಲ್ಲಿದ್ದರೂ ಸಿನೆಮಾ ನೋಡದವರು ಸಿಗುವುದು ಕಡಿಮೆ. ಅದರಲ್ಲೂ ಉನ್ನತ ಹುದ್ದೆಯಲ್ಲಿದ್ದವರು ತಮ್ಮ ಕೆಲಸದ ಒತ್ತಡದ ಮಧ್ಯೆ ಸಿನೆಮಾ ನೋಡುವುದು ಸಾಮಾನ್ಯ . ಆದರೇ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, 35 ವರ್ಷದಿಂದ ಸಿನೆಮಾವನ್ನೇ ನೋಡಿಲ್ಲ, ನನಗೆ ಮೂರು ಗಂಟೆ ಒಂದೇ ಕಡೆ ಕೂಡಲು ಸಮಯ ಸಿಕ್ಕಿಲ್ಲ ಎಂಬ ಸತ್ಯವನ್ನು ಹೊರ ಹಾಕಿದ್ದಾರೆ. ಈ ಒಂದು ಮಾತು ಸೈನಿಕರಲ್ಲಿರುವ ಕಾರ್ಯತ್ಪರತೆ, ದೇಶ ಭಕ್ತಿಗೆ ಸಾಕ್ಷಿಯಾಗಿ ನಿಂತಿದೆ.

ದೆಹಲಿಯ ಪಬ್ಲಿಕ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ 8ನೇ ತರಗತಿ ವಿದ್ಯಾರ್ಥಿ ಶ್ರೀವೋಮ್ ಕಶ್ಯಪ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವದ ಬಲಿಷ್ಠ ಸೈನಿಕ ಪಡೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರು ಕಳೆದ 35 ವರ್ಷದಿಂದ ಸಿನೆಮಾವನ್ನೇ ನೋಡಿಲ್ಲ ಎಂದು ಹೇಳಿದ್ದಾರೆ. ನನಗೆ 35 ವರ್ಷದಿಂದ ಸಿನೆಮಾ ನೋಡಲು ಮೂರು ಘಂಟೆ ಸಮಯ ದೊರಕ್ಕಿಲ್ಲ ಎಂಬ ಉತ್ತರವನ್ನು ನೀಡುವ ಮೂಲಕ ದೇಶಸೇವೆಗೆ ಅವರ ಕೊಡುಗೆ ಎಂಥಾದ್ದು ಎಂಬುದನ್ನು ತಿಳಿಸಿದ್ದಾರೆ.

ಅಲ್ಲದೇ ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆಯನ್ನು ನೀಡಿರುವ ಅವರು ‘ಕಠಿಣ ಪರಿಶ್ರಮ ಪಡಿ. ಯಶಸ್ಸು ದೊರೆಯುತ್ತದೆ. ಜೀವನದಲ್ಲಿ ವಿಫಲರಾದವರನ್ನು ನೋಡದೇ ಮುನ್ನಡೆಯಿರಿ. ದೇಶಸೇವೆ ಮಾಡಲು ಮಕ್ಕಳು ಭವಿಷ್ಯದಲ್ಲಿ ಸೇನೆ ಸೇರಬೇಕು ಎಂದು ಹೇಳಿದರು.

ಭಾರತೀಯ ಸೇನೆಗೆ 1978 ಡಿಸೆಂಬರ್ 16ರಂದು ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ರಾವತ್ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರ ದೇಶ ಸೇವೆ ಆರಂಭವಾಗಿ ಸುಮಾರು 40 ವರ್ಷಗಳಾಗಿದ್ದು, ಸುಮಾರು 35 ವರ್ಷದಿಂದ ಸಿನೆಮಾವನ್ನೇ ನೋಡಿಲ್ಲ. ನನಗೆ ಸಿನೆಮಾ ನೋಡಲು ಮೂರು ಘಂಟೆ ಸಮಯ ಸಿಕ್ಕಿಲ್ಲ ಎಂಬ ಅವರ ಮಾತು ಎಂಥವರಿಗೂ ದೇಶ ಸೇವಕನ ಕಾರ್ಯ ವೈಖರಿಗೆ ಹೆಮ್ಮೆ ಮೂಡಿಸದೇ ಇರದು. ಇಂಥವರಿಂದಲ್ಲವೇ ಭಾರತ ರಕ್ಷಣಾ ವ್ಯವಸ್ಥೆ ಇಷ್ಟು ಬಲಿಷ್ಠವಾಗಿರುವುದು.

Be the first to comment